Wednesday 28 August 2019

ಚಂದ್ರಣ್ಣ.... ಚಂದ್ರಣ್ಣ........ಚಂದ್ರಣ್ಣ ...ಎಂದು ಮುಸ್ತಾಫ  ಕಿರುಚುತಿದ್ದ ಯಾವಾಗಲು ಕಿರಿಕಿರಿ ಇವನದ್ದು ಇದ್ದದೆ ಹಾಗೆ ಕಂಪ್ಯೂಟರ್ ನಲ್ಲಿ ಫೋಟೊ ಕರೆಕ್ಷನ್ ಮಾಡುವಲ್ಲಿ ಮಗ್ನನಾಗಿದ್ದೆ. ಚಂದ್ರಣ್ಣ ಹಾವು ಎಂದು ಯಾವಾಗ ಹೇಳಿದನೊ ಜೀವವೆ ಕೈಗೆ ಬಂದಂತಾಗಿ ಎದ್ದು ನೋಡಲು ಕಪ್ಪು ಬಣ್ಣದ ಹಾವು ಬಾಗಿಲ ಬಳಿಯಿರಲು ಗಾಬರಿಯಾಗಿ ತಲೆಯಲ್ಲಿ ಹಳೆಯ ನೆನಪುಗಳೆಲ್ಲೆ ಕಣ್ಣ ಮುಂದೆ ಬಂದು ಹಾಗೆ ಮರೆಯಾದವು. ಅಷ್ಟರೊಳಗೆ ವಿಭಾಗದವರೆಲ್ಲರು ಬಂದು ಸೇರಿ ಎಲ್ಲಿ  ಎಲ್ಲಿ ಎಂದು ನೋಡುತಿದ್ದರೆ ಹಾವು  ಸ್ಟೋಡಿಯೊ ಒಳಗೆ ಬಂದು ಕಾಪಾಟಿನ ಅಡಿಯಲ್ಲಿ ಸೇರಿಬಿಟ್ಟಿತ್ತು . ಮುಸ್ತಫ ಹಾಗು ಕೆಲವರು ಸೇರಿ ಕಿರುಚಾಡಿ ಬೊಬ್ಬೆಯಾಕಿ ಒಳಗಿಂದ ಹೊರಗೆ ಕಳುಹಿಸಿದರು. ಇಲ್ಲಿ ಸೇರಿದ್ದವರೆಲ್ಲ ಹಾವವನ್ನು ನೋಡಿ ಇದು ವಿಷದ್ದು ಇನ್ನು ಕೆಲವರು ಇದು ಏನು ಮಾಡುವುದಿಲ್ಲ ಎಂದು ಹೇಳಿ ಮಾರು ದೂರವೆ ನಿಂತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆಗ ಭೌತಶಾಸ್ತ್ರ ವಿಭಾಗದ ರಿಟೈರ್ಡ್ ಪ್ರೊಪೇಷರ್ ಬಾಲಕೃಷ್ಣ ಸಾರ್ ಅವರ ನೆನಪಾಗಿ ಫೋನ್ ಮಾಡಿದೆ ತಕ್ಷಣವೆ ಬಂದ ಅವರು ತಮ್ಮದೆ ಶೈಲಿಯಲ್ಲಿ ಇದು ನಾನ್ ಪಾಯೈಷನ್ ಎಂದು ಸರಾಗವಾಗಿ ಹಾವನ್ನು ಹಿಡಿದು ಹಾಗೆ ಕೆಲವು ಪ್ರದರ್ಶನವನ್ನು ಕೊಟ್ಟರು.  ಕ್ರಿಯೇಟಿವ್ ರೈಟರ್ ಮುಸ್ತಫ ಹೀಗೆ ಯಾವಾಗಲು ಕ್ರಿಯೇಟಿವ್ ಕಿರಿಕಿರಿ ಮಾಡುತ್ತಲೆ ಎಲ್ಲ ಕೆಲಸ ಕಾರ್ಯಗಳಲ್ಲಿ ಹೇಳಿಸಿಕೊಳ್ಳದೆ ಸಹಾಯಕನಾಗಿ ನಿಲ್ಲುತ್ತಾನೆ. ತ್ಯಾಂಕ್ಯು ಕಿರಿಕಿರಿ....      ಹಾಗೆ ತೆಗೆದ ಕೆಲವು ಛಾಯಾಚಿತ್ರಗಳು.






1 comment: