Monday 11 April 2016

ಆಚರಣೆಗಳು ಎನ್ನುವುದು ಒಮ್ಮಿಂದೊಮ್ಮೆಲೆ ಉದ್ಭವಿಸುವಂತಹದಲ್ಲ, ಘಟಿಸುವಂತಹದಲ್ಲ. ಅವು ಕಾಲಕ್ಕೆ ಅನುಗುಣವಾಗಿ ಹೊಸ ಆವಿಸ್ಕಾರಗಳೊಂದಿಗೆ ಬದಲಾವಣೆ ಹೊಂದುತ್ತ ತಮ್ಮ ಭವಿಷ್ಯದ  ಆಶೋತ್ತರಗಳಿಗೆ ಒಗ್ಗಿಗೊಳ್ಳುತ್ತಲೆ ಚಲನಶೀಲವಾಗಿದೆ. ಆ ಕಾರಣಕ್ಕಾಗಿಯಿ ಯುಗಾದಿ ಹಬ್ಬವು ಹೊಸ ಹೊಸ ಕನಸುಗಳನ್ನು  ಒತ್ತು ಮತ್ತೆ ಮತ್ತೆ ಯುಗಾದಿ ಹಬ್ಬಗಳು ಪುನರಪಿ ಘಟಿಸುತ್ತವೆ. ಬುದುಕಿನ ಬಾಳ್ವೆಯಲ್ಲಿ ಸಿಹಿಕಹಿಗಳೆರಡು ಸಮರಸವೆ ಮೈವೆತ್ತಂತ್ತ ಭಾವ ನಮ್ಮನ್ನು ಆವರಿಸುತ್ತದೆ. ಹೀಗೆ ನಮ್ಮ ಪೂರ್ವಿಕರು ತಮ್ಮ ಬದುಕಿನಲ್ಲಿ ವರ್ಷಾರಂಭದ ಸಂಕೇತವಾಗಿ ಯುಗಾದಿಯಂದು ಗ್ರಾಮದೇವತೆಗಳನ್ನು ಗರ್ಭಗುಡಿಯಿಂದ ಹೊರತಂದು ಊರಿನೆಲ್ಲೆಲ ಮೆರವಣಿಗೆಮಾಡಿ, ಪ್ರತಿಯೊಂದು ಮನೆಯಲ್ಲಿ ದೇವರನ್ನು ಹೊತ್ತವರ ಕಾಲನ್ನು ತೊಳೆದು ದೇವರಿಗೆ ಆರತಿಯನ್ನು ಬೆಳಗುತ್ತಾರೆ. ಯುಗಾದಿ ಹಬ್ಬದಲ್ಲಿ ದೇವರ ಈ ಮೆರವಣಿಗೆಯು ಮನುಷ್ಯ ಮತ್ತು ಅಲೌಕಿಕ ಜಗತ್ತಿನ ನಡುವಿನ ಅನುಸಂಧಾನದಂತೆ ನಮಗೆ ಗೋಚರವಾಗುತ್ತದೆ. ಗ್ರಾಮದ ಜನಾಂಗಗಳು ತಮ್ಮಗಳ ನಡುವಿನ ವೈಮಸ್ಸನ್ನು ಮರೆತು ದೇವರ ಮೆರವಣಿಗೆಯಲ್ಲಿ ಊರಿನ ಎಲ್ಲಾ ಸದಸ್ಯರು ಭಾಗವಹಿಸುತ್ತಾರೆ. ದೇವರು ಮತ್ತು ಮನುಷ್ಯರ ನಡುವೆ ಸಮಭಾವ ಸಮ್ಮಿಳನಗೊಂಡಂತೆ ಮನುಷ್ಯನ ಮೂಲಕ ಪವಾಡಗಳು ಘಟಿಸುವಂತಹ, ಮಾನವನ ಮೇಲೆ ದೇವರು ಆವಾಹನೆಗೊಂಡು ತಮ್ಮೂಲಕ ಬದುಕಿನ ಆಶಯ ಸಾಕಾರಗೊಳ್ಳುವಂತ ಸನ್ನಿವೇಷ ಕಾಣಿಸಿಕೊಳ್ಳುತ್ತವೆ.
ವಡ್ಡರಹಳ್ಲಿ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯಜಿಲ್ಲೆಯಲ್ಲಿ ಯುಗಾದಿ ಹಬ್ಬದಲ್ಲಿ ದೇವರನ್ನು ಎತ್ತಿ ಮೆರವಣಿಗೆಯನ್ನು ಮಾಡುವಂತಹ ಸನ್ನಿವೇಷ ಎಲ್ಲರ ಗಮನ ಸೆಳೆದು ಕಣ್ತುಂಬಿಕೊಂಡಂತಹ ಕ್ಷಣಗಳು.....