Thursday 25 February 2016

ಊರಲ್ಲಿ ಕಂಗೀಲು ಕುಣಿತ ನಡೆಸಿದರೆ ಮಾರಿ-ಬೀರಿ ದೂರವಾಗುತ್ತದೆ ಎಂಬ  ನಂಬಿಕೆ  ಇದೆ. ಊರಿಗೆ ತಟ್ಟಿದ ಅನಿಷ್ಟಗಳು, ರೋಗ ರುಜಿಗಳು, ಬೆಳೆಗೆ ಬಂದ ರೋಗಗಳು ದೂರವಾಗಿ ಹೋಗಲೆಂಬ  ಉದ್ದೇಶದಿಂದ  ಈ ಕುಣಿತವನ್ನು ನಡೆಸಿ ಮನೆಗಳಿಂದ ಧವಸ ಧಾನ್ಯಗಳನ್ನು ಸಂಗ್ರಹಿಸಿ ಕೊನೆಯದಿನ ಊರ ಹೊರಗೆ ಅಡುಗೆ ಮಾಡಿ ಮಾರಿಗೆ ಬಡಿಸಿ ಅದನ್ನು ದೂರ ಕೊಂಡೊಯ್ದು ಇಟ್ಟು ಬರುವ  ಕ್ರಮವಿದೆ.
ಪ್ರೊ. ಕೆ. ಅಭಯಕುಮಾರ್ ಅವರ ನೇತೃತ್ವದಲ್ಲಿ  ಎಂ.ಎ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ದಿನಾಂಕ 22 ಫೆಬ್ರವರಿ ಯಂದು ಉಡುಪಿ ಜಿಲ್ಲೆಯ ಕಾಪುವಿನ ಬಳಿ ಮಟ್ಟು  ಎಂಬ ಗ್ರಾಮದಲ್ಲಿ ಕಂಗೀಲು ಕುಣಿತದ ಕ್ಷೇತ್ರಕಾರ್ಯದಲ್ಲಿ ಮಾಹಿತಿ, ಛಾಯಾಚಿತ್ರಗಳನ್ನು ಹಾಗೂ ವಿಡಿಯೋ ದಾಖಲೀಕರಣ ಮಾಡಲಾಯಿತು.