Friday 20 May 2016



ದುಬಾರೆ

                                                                                                                              -ಚಂದ್ರ ಶೇಖರ ಎಂ.ಬಿ
ದುಬಾರೆ ಎಂಬ ಪದ ನನಗೆ ಕುತೂಹಲ ಹಾಗು ಕೌತುಕದ ಪ್ರಶ್ನೆ. ಏಕೆಂದರೆ, ನಾನು ಮೊಟ್ಟ ಮೊದಲು ಕುಬಾರೆಗೆ ಹೋಗಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಸಬಿಹಾ ಭೂಮಿಗೌಡ ಅವರ ಕ್ಷೇತ್ರ ಕಾರ್ಯ ನಿಮಿತ್ತ. ಆಗ ದೋಣಿಯಲ್ಲಿ ವಿಹರಿಸಿ, ಆನೆಗಳ ಮಜ್ಜನ ಅವುಗಳ ಆಹಾರ ಕ್ರಮಗಳನ್ನು ವಿಡಿಯೊ ದಾಖಲಿಸಿ ಗಿರಜನರ ಮುಖಂಡ ಡೋಬಿ ಅವರನ್ನು ಸಂದರ್ಶನ ಮಾಡಿ ಕಣ್ತುಂಬಿಕೊಂಡಿದ್ದೆ.
ಅದಾದನಂತರ ಮತ್ತೊಮ್ಮೆ ದುಬಾರೆಗೆ ಭೇಟಿನೀಡಿ ಡೋಬಿಯವರಿಂದ ತಮ್ಮ ಅರಣ್ಯವಾಸದ ತವಕ ತಲ್ಲಣಗಳನ್ನು ಹಾಗೆ ಅವರ ಹೋರಾಟದ ಬದುಕಿನ ಬವಣೆಗಳನ್ನು ಹೋರಾಟ ಗೀತೆಗಳ ಮೂಲಕ ಡಾ. ಸಬಿಹಾ ಭೂಮಿಗೌಡ ಅವರ ಉಪಸ್ಥಿತಿಯಲ್ಲಿ ದಾಖಲಿಕರಣಗೊಳಿಸಲಾಯಿತು.
ಈ ದೇಶ ನಂಗ ದೇಶ.....
ಜೇನು ಕುರುಬ ಮಕ್ಕ ನಂಗ.......
ಈ ಕಾಡು ಈ ಮೇಡು ನಂಗ ಕಾಡು..... ಇನ್ನು ಹಲವು ಗೀತೆಗಳು ನನ್ನ ಮನಸ್ಸಿನಲ್ಲಿ ಹಚ್ಚೊತ್ತಿವೆ.
ಇತ್ತೀಚೆಗೆ ಭಾವ ಕುಮಾರ್ ಹಾಗು ಅತ್ತೆ ಮಗ ಶಂಭು ಅವರೊಂದಿಗೆ ದುಬಾರೆ ಕಡೆಗೆ ಮಂಗಳೂರಿನಿಂದ ಪ್ರಯಾಣ ಬೆಳೆಸಿದೆವು. ಪ್ರಯಾಣದ ಮಧ್ಯೆ ನನ್ನ ಕ್ಷೇತ್ರ ಕಾರ್ಯದ ಕೆಲವು ಘಟನೆಗಳನ್ನು ಹೇಳುತ್ತಾ ಡೋಬಿ ಬಗ್ಗೆ ವಿವರಗಳನ್ನು ನಿಡುತ್ತಿದ್ದೆ. ಅವರ ಬಿದುರಟ್ಟಿಯ ಮನೆಗಳು, ಪ್ಲಾಸ್ಟಿಕ್ ಮೇಲ್ಚಾವಣಿಯ ಮನೆಗಳು ಕಾಡಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಬಗೆ ಇದೆಲ್ಲವನ್ನು ಕೇಳುತ್ತಿದ್ದ ಇವರು ದುಬಾರೆಯನ್ನು ಕಂಡೆ ತೀರಬೇಕೆಂದು ಕಾರಿನ ವೇಗವನ್ನು ಹೆಚ್ಚಿಸಿದರು.
ಕುಶಾಲನಗರ ತುಲುಪಿದಾಗ  ನಾನು ಸುಮ್ಮನೆ 'ಯೊ ಈಗ ಘಂಟೆ ಐದಾಯ್ತು ನಾವು ದುಬಾರೆಯನ್ನು ನೋಡಿ ಬೆಂಗಳೂರು ತಲುಪುವುದೊರಳಗೆ ರಾತ್ರಿ ಕಳೆದು ಹಗಲಾಗುತ್ತದೆ. ದುಬಾರೆಗೆ ಹೋಗುವುದು ಬೇಡ ಎಂದನಷ್ಟೇ, ಮದವೇರಿದ ಆನೆಗಳು ದಿಢೀರನೆ ಮೈಮೇಲೆ ಅಪ್ಪಳಿಸಿದಂತಾದ ಅನುಭವ ಕ್ಷಣಾರ್ಧ ನನ್ನನ್ನು ಆವರಿಸಿತು'. ಇವರ ಆವೇಶವನ್ನು ಮನಗಂಡ ನಾನು ವಿದಿಯಿಲ್ಲದೆ ಬಲಕ್ಕೆ ಕೈ ತೋರಿಸಿ ದುಬಾರೆ ಮಾರ್ಗಹಿಡಿದು ಹೊರಟೆವು.
ಕೊಡಗಿನ ಕುಶಾಲನಗರ ಬಳಿಯ ನಂಜರಾಯಪಟ್ಟಣದ ಬಳಿ ಕಾವೇರಿ ಕವಲೊಡೆದು ದುಬಾರೆಯನ್ನು ಸೃಷ್ಟಿಸಿದೆ. ನಾವು ಅಲ್ಲಿಗೆ ತಲುಪಿದೆವು ಬೇಸಿಗೆಯಾಗಿದ್ದರಿಂದ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿ ನಾವು ಕಲ್ಲಿನಿಂದ ಕಲ್ಲಿಗೆ ಹಾರುತ್ತ ಕುಬಾರೆ ಸೇರಿದವು. ಅಷ್ಟರೊಳಗೆ ಸಂಜೆ ಆರು ಗಂಟೆಯಾಗಿತ್ತು. ಮುಸಂಜೆಯಾಗಿದ್ದರಿಂದ ತಂಪಾದವಾತಾವರಣ ಆನೆಗಳಿಗೆ ನದಿಯಲ್ಲಿ ನೀರುಣಿಸಿ, ಮಜ್ಜನ ಮಾಡಿಸಿದ ಮಾವುತರು ಅವುಗಳನ್ನು ಕಾಡಿಗೆ ಬಿಟ್ಟುಬರುವ ಸಂದರ್ಭ. ಒಂದಲ್ಲ ಎರಡಲ್ಲ ಹತ್ತಾರು ಆನೆಗಳನ್ನು ನೋಡಿದ  ಇವರಿಗೆ ಎಲ್ಲಿಲ್ಲದ ಹರ್ಶೋದ್ಘಾರ. ಆನೆಯ ದಂತ, ಮೈ ಸಾವರಿಸಿ ತಮ್ಮ ಮನದಿಂಗಿತವನ್ನು ತಣಿಸಿಕೊಂಡು ಆನೆಗಳನ್ನು ಹಿಂಬಾಲಿಸುತ್ತಾ ಗಿರಿಜನರ ಹಾಡಿಗಳಿಗೆ ಪ್ರವೇಶ ಮಾಡಿದಾಗ  ಅದೃಷ್ಟವಶಾತ್ ಎಂಬಂತೆ ತಮ್ಮ ಹತ್ತಿರದ ನೆಂಟರ ಮದುವೆ ಮುಗಿಸಿ ಬಂದಿದ್ದ ಡೋಬಿಯವರು  ಪ್ರತ್ಯಕ್ಷವಾದರು. ಅವರಲ್ಲಿ ಕುಶಲೋಪರಿ ಮಾತನಾಡುತ್ತಾ ಅಕ್ಕ ಪಕ್ಕ ಕಣ್ಣಾಯಿಸಿದಾಗ ಹಿಂದಿ ನೋಡಿದ ಬಿದಿರಟ್ಟಗಳು ಕಣ್ಮರೆಯಾಗಿ ಸಣ್ಣ ಒಂದಕ್ಕೊಂದು ಹಂಟಿಕೊಂಡಿರುವ ಮನೆಗಳನ್ನು ಗಮನಿಸಿದೆ. ಈ ಐದು ವರ್ಷಗಳಲ್ಲಿ ಹಾಡಿಯ ಜನರ ವಾತಾವರಣವೆ ಬದಲಾಗಿದ್ದು ತುಸು ನೆಮ್ಮದಿಯನ್ನು ತಂದಿತ್ತು. ಕಾವೇರಿ ನದಿಯ ಇಕ್ಕೆಲಗಳಲ್ಲಿ ಒಂದು ಕಡೆ ಪಟ್ಟಣ ಇನ್ನೊಂದು ಕಡೆ ಯಾವುದೆ ಮೂಲಭೂತ ಸವಲತ್ತುಗಳಿಲ್ಲದೆ ತಮ್ಮ ನಿರಂತರ ಹೊರಾಟದ ಮೂಲಕ ಇಂದು ಗಳಿಸಿಗೊಂಡ ವಾತಾವರಣ ಮನಸ್ಸಿಗೆ ಮುದವನ್ನು ನೀಡಿತ. ಅಲ್ಲಿ ಶಾಲೆ, ವಿದ್ಯುತ್, ನೀರಿನ ವ್ಯವಸ್ಥೆಗಳನ್ನು ನೋಡಿ, ಡೋಬಿಯವರ ಮಾತುಗಳನ್ನು ಕೇಳಿ ಸಂತಸಗೋಡೆವು.
ಯಾವುದೊ ಒಂದು ಹೊರೆ ನಮ್ಮಿಂದ ಕಳಚಿದ ಭಾವದಿಂದ ನಾವು ಸಂತಸದಿಂದ ಬೆಂಗಳೂರಿನ ಕಡೆ ಪ್ರಯಾಣ ಬೆಳಿಸಿದೆವು.





























No comments:

Post a Comment